ಅಸ್ತಿತ್ವಕ್ಕಾಗಿ ಕಳಸಬಂಡೂರಿ ಹೋರಾಟ
Posted date: 30 Thu, Jun 2016 – 09:20:54 AM

 ಬಡತನದಲ್ಲಿ ಹುಟ್ಟಿದ ನಾಯಕ ಅಸ್ತಿತ್ವಕ್ಕಾಗಿ ಹೋರಾಟ ಮಾಡುವ ಸಿನಿಮಾ ಅಸ್ತಿತ್ವ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮನರಂಜನೆಗಿಂತ ಮಾರ್ಮಿಕ ಮಾತುಗಳು ಹೆಚ್ಚಾಗಿ ಕೇಳಿಬಂದವು. ನಾಯಕನಾಗಿ ಮೊದಲಬಾರಿ ನಟಿಸಿರುವ ಟೆಕ್ಕಿ ಯುವರಾಜ್, ನಾಯಕಿ ಪ್ರಜ್ವಲ್‌ಪೂವಯ್ಯ, ದುನಿಯಾರಶ್ಮಿ, ಶೈನ್‌ಶೆಟ್ಟಿ, ಮಧುಸುಧನ್, ಗಾಯಕ ಬದರಿಪ್ರಸಾದ್, ಸಂಕಲನಕಾರ ಶ್ರೀ ಎಲ್ಲರೂ ತಮ್ಮ ಕೆಲಸದ ಕುರಿತು ಮಾಹಿತಿ ನೀಡಿದರು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನೀರಿನ ಅಭಾವ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದರನ್ವಯ ಕಳಸಬಂಡೂರಿ ಹೋರಾಟದಲ್ಲಿ ಸಕ್ರಿಯರಾಗಿರುವ ಮೂವರನ್ನು ನಿರ್ಮಾಪಕರು ಆಹ್ವಾನಿಸಿದ್ದು ವಿಶೇಷವಾಗಿತ್ತು. ಮೂರು ಹಾಡು, ಟ್ರೈಲರ್ ತೋರಿಸಿ, ಸಿಡಿಗಳನ್ನು ಹಿಡಿದುಕೊಂಡು ವಾಹಿನಿ, ಛಾಯಗ್ರಾಹಕರಿಗೆ ಫೋಸ್ ನೀಡಿದ ತರುವಾಯ ಕಳಸಬಂಡೂರಿ ಬಗ್ಗೆ ವಿವರ ಪರದೆ ಮೇಲೆ ಬಂದಾಗ ಸಭಾಂಗಣ ಮೌನವಾಯಿತು. ಅಲ್ಲಿ ನೀರಿಗಾಗಿ ಬವಣೆ ಪಡುತ್ತಿರುವ ಜನರ ಸ್ಥಿತಿಯನ್ನು ಕಂಡು ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾದವು.
       ಸಕ್ರೀಯ ಕಾರ್ಯಕರ್ತ ವಿಕಾಸ್‌ಸೂಫನ್ ತಮ್ಮ ಮಾತನಲ್ಲಿ ಚಿತ್ರರಂಗವು ಕಳಸಬಂಡೂರಿಗಾಗಿ ಪ್ರೋತ್ಸಾಹ ನೀಡುತ್ತಿದೆ. ನಾವುಗಳು ನೀರಿಗಾಗಿ ಅಸ್ತಿತ್ವವನ್ನು ಕೇಳುತ್ತಿದ್ದೇವೆ. ೫೪ ವರ್ಷಗಳಿಂದ ಇದರ ಬಗ್ಗೆ ಚಳುವಳಿ ನಡೆಯುತ್ತಿದ್ದರೂ ರಾಜಕೀಯದವರು ಆಸಕ್ತಿ ತೋರದೆ ಇರುವುದು ದುರದೃಷ್ಟಕರವಾಗಿದೆ. ಜುಲೈ ೧೧ ರಂದು ಈ ವಿಷಯದ ಬಗ್ಗೆ ತೀರ್ಪು ಹೊರಬರಲಿದೆ. ಇದನ್ನು ನೋಡಿಕೊಂಡು ಮುಂದೆ ಯಾವ ರೀತಿ ಹೋರಾಟ ಮಾಡಬೇಕೆಂದು ತೀರ್ಮಾನಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಾಗೋವಿಂದು ತಂಡವು ಸಿದ್ದಪಡಿಸಿದ ಕಿರುಚಿತ್ರವು ಚೆನ್ನಾಗಿದೆ. ಇದನ್ನು  ಸವಿಸ್ತಾರವಾಗಿ ಮಾಡಿದಲ್ಲಿ ಮತ್ತಷ್ಟು ಅರಿವು ಬರುತ್ತದೆ. ನಮ್ಮ ಕಡೆಯಿಂದ ಇದಕ್ಕೆ ಸಹಕಾರ ದೊರೆಯಲಿದೆ ಎಂದರು. ನಿರ್ಮಾಪಕ ವಿಶ್ವಕಾರಿಯಪ್ಪ ಕೋರಿಕೆಯನ್ನು ಗಣೆನಗೆ ತೆಗೆದುಕೊಳ್ಳುತ್ತೇವೆ. ಇದನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ತೋರಿಸುವ ಪ್ರಯತ್ನವನ್ನು ಮಾಡಬೇಕೆಂದು ಭಿನ್ನವಿಸಿಕೊಂಡಾಗ, ಅಧ್ಯಕ್ಷರು ಆಗಲಿ ಎನ್ನುವಲ್ಲಿಗೆ ಅಂದಿನ ಅರ್ಥಪೂರ್ಣ ಸಮಾರಂಭಕ್ಕೆ ತೆರೆಬಿತ್ತು. ನಿರ್ದೇಶಕ ನೂತನ್‌ಉಮೇಶ್ ನಿರೂಪಣೆ ಸೊಗಸಾಗಿತ್ತು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed